ಬಾರಲೆ ಬಾ ಬಣ್ಣದ ಹಕ್ಕಿ
ಬಾರಲೆ ಬಾ ಹಾರುವ ಹಕ್ಕಿ
ಗೆಳೆಯರು ಯಾರು ಆಡಲು ಇಲ್ಲ
ಕಳೆಯುವುದೆಂತು ವೇಳೆಯನೆಲ್ಲ
ಬಾ ಬಾ ನನಗೂ ಹಾಡಲು ಕಲಿಸು
ಬಾ ಬಾ ನನಗೂ ಹಾರಲು ಕಲಿಸು
ಅವ್ವನು ನೀರಿಗೆ ಹೋಗಿಹಳು
ಅಪ್ಪನು ಪೇಟೆಗೆ ಹೋಗಿಹನು
ಅವ್ವನು ಬರಲಿ ಅಪ್ಪನು ಬರಲಿ
ತಿನ್ನಲು ಹಣ್ಣನು ನೀಡುವೆನು
ನನಗೂ ಬಣ್ಣದ ರೆಕ್ಕೆಯ ಹಚ್ಚು
ಹಿಂಗಡೆ ಬಣ್ಣದ ಪುಚ್ಚವ ಚುಚ್ಚು
ನೆತ್ತಿಯ ಮೇಲೆ ಜುಟ್ಟನು ಚುಚ್ಚು
ಮೆಲ್ಲನೆ ಮೇಲೆ ಹಾರಲು ಹಚ್ಚು
ನಾನು ನೀನು ಇಬ್ಬರು ಕೂಡಿ
ಮುಗಿಲಿನೆಡೆಗೆ ಹಾರುವ ಬಾ
ಹಾರುತ ಹಾಡುತ ನಲಿಯುವ ಬಾ